ಕುರುವತ್ತಿ
ಹರಿಹರದ ವಾಯವ್ಯಕ್ಕೆ 20 ಮೈ. ದೂರದಲ್ಲಿ ತುಂಗಭದ್ರಾನದಿಯ ದಂಡೆಯಲ್ಲಿರುವ ಗ್ರಾಮ. ಇಲ್ಲಿರುವ ಮಲ್ಲಿಕಾರ್ಜುನದೇವಾಲಯ ಕಲ್ಯಾಣ ಚಾಳುಕ್ಯ ಶಿಲ್ಪ ಶೈಲಿಯದು. ಗೋಡೆಗಳ ಮೇಲಿನ ಶಿಲ್ಪ ಸ್ವಲ್ಪ ಮಟ್ಟಿಗೆ ಇಟಗಿಯ ಮಹಾದೇವ ದೇವಾಲಯವನ್ನು ಹೋಲುತ್ತದೆ. ಬೇಲೂರು ಮತ್ತು ಹಳೇಬಿಡು ದೇವಾಲಯಗಳಂತೆ ಮಲ್ಲಿಕಾರ್ಜುನ ದೇವಾಲಯದಲ್ಲೂ ಮದನಿಕಾವಿಗ್ರಹಗಳಿವೆ. ಕುರುವತ್ತಿಯ ದೇವಾಲಯಕ್ಕೆ ಸೇರಿದ ಬ್ರಹ್ಮನ ಸುಂದರ ವಿಗ್ರಹವೊಂದು ಫಿಲಡೆಲ್ಫಿಯದ ಕಲಾಸಂಗ್ರಹದ ಶಾಲೆಯಲ್ಲಿದೆ. ಆ ವಿಗ್ರಹವನ್ನು ಚಾವುಣೋಜ ಕಡೆದನೆಂದು ಅದರ ಕೆಳಗಡೆ ಇರುವ ಶಾಸನದಿಂದ ಗೊತ್ತಾಗುತ್ತದೆ.
(ಎಸ್.ಎಂ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ